Sunday, March 16, 2008

ನರ್ಸಿ0ಗ್ ಜತೆ ಯಕ್ಷಗಾನದ ರಾಗ : ವಿದ್ಯಾರ್ಥಿ ಮಂಜುನಾಥ ಹೆಗಡೆಯ ಹವ್ಯಾಸ

ಉತ್ತರ ಕನ್ನಡದ ಸಿದ್ದಾಪುರದ ಮಾಣಿಗಾರ್ನ ನೆಟ್ಗಾರ್ನ ಮಂಜುನಾಥ ಹೆಗಡೆ ನರ್ಸಿ0ಗ್ ವಿದ್ಯಾರ್ಥಿ. ಇವರಿಗೆ ಬಾಲ್ಯದಿಂದಲೇ ಯಕ್ಷಗಾನದ ಸೆಳೆತ. ಇವರ ತಂದೆ ಶಂಕರ್ ಎಂ. ಹೆಗಡೆಯವರಿಗೂ ಯಕ್ಷಗಾನದ ಗೀಳು. ಮಂಜುನಾಥ ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗಲೇ ಯಕ್ಷಗಾನದ ಭಾಗವತಿಕೆಯ ಅಭ್ಯಾಸವನ್ನು ಪರಮೇಶ್ವರ ಹೆಗಡೆ ಐನಬೈಲ್ ಇವರಿಂದ ಮಾಡಿದರು. ಉಡುಪಿ ಯಂ.ಜಿಎಂ. ಯಕ್ಷಗಾನ ಕೇಂದ್ರ ಇವರ ಯಕ್ಷಗಾನದ ಆಸಕ್ತಿಗೆ ಕಲಿಕಾ ಕೇಂದ್ರವಾಯಿತು. ಸಂಜೀವ ಸುವರ್ಣ, ನೀಲಾವರ ಲಕ್ಷ್ಮೀನಾರಾಯಣಯ್ಯ, ಗೋಪರ್ಾಡಿ ವಿಠಲ್ ಪಾಟೀಲರು ಇವರಿಗೆ ನೃತ್ಯವನ್ನು ಕಲಿಸಿದ ಗುರುಗಳು. ಪಿಯುಸಿ ಮುಗಿಸಿರುವ ಇವರು ಭಾಗವತಿಕೆಯಲ್ಲಿ ಹಳೆಯಮಟ್ಟುಗಳು, ರಾಗಗಳನ್ನು, ಪೂರ್ವರಂಗದ ಸಮಗ್ರ ಅಭ್ಯಾಸವನ್ನು ಮಾಡಿದ್ದಾರೆ. ವಿವಿಧ ಪಾತ್ರಗಳ ನಿರ್ವಹಣೆಯನ್ನೂ ಮಾಡಿದ್ದಾರೆ. ಇವರು ನಾಲ್ಕೈದು ಮಂದಿಗೆ ಯಕ್ಷಗಾನದ ಭಾಗವತಿಕೆಯ ಪ್ರಾಥಮಿಕ ತಾಳಾಭ್ಯಾಸವನ್ನೂ ಮಾಡಿದ್ದಾರೆ.
ಅವಿಭಕ್ತ ಕುಟುಂಬದ ಸದಸ್ಯರಾದ ಇವರಿಗೆ ಲಕ್ಷ್ಮೀನಾರಾಯಣ ಮತ್ತು ಶ್ರೀಪಾದ ಸಹೋದರರು ಮತ್ತು ಮಧುರಾ ಸಹೋದರಿ. ತಾಯಿ ಲಕ್ಷ್ಮೀದೇವಿ ಎಸ್ ಹೆಗಡೆ.
ವಿದೇಶಿಯರನ್ನೂ ಆಕಷರ್ಿಸುವ ಯಕ್ಷಗಾನದ ಬಗ್ಗೆ ನಮ್ಮಲ್ಲಿ ಕಾಳಜಿ ಇಲ್ಲ ಎಂಬುದು ಇವರ ಕೊರಗು. ಶಾಲಾ ಕಾಲೇಜುಗಳಲ್ಲಿ ಪಠ್ಯದ ಜತೆಗೆ ಯಕ್ಷಗಾನ ತರಬೇತಿ ನೀಡಬೇಕು ಎಂಬುದು ಇವರ ಅಭಿಪ್ರಾಯ. ಸಾಂಪ್ರದಾಯಿಕ ತೆರೆ ಕುಣಿತ, ಬಾಲ ಗೋಪಾಲ ನಶಿಸಿಹೋಗಬಾರದು. ಸಿನಿಮಾ ಕಥೆ ಯಕ್ಷಗಾನಕ್ಕೆ ಅವಶ್ಯಕತೆಯಿಲ್ಲ. ಇದರಿಂದ ಹಾಸ್ಯಾಸ್ಪದ ಪ್ರಸಂಗ ಉದ್ಭವಿಸುತ್ತದೆ. ಸುಗಮ ಸಂಗೀತದ ಭಾಗವತಿಕೆ ಸರಿಯಲ್ಲ. ಭಾಗವತ ಪೇಟ ಕಟ್ಟವುದು ಮರೆಯಾಗುತ್ತಿದೆ. ಎಂಬುದು ಇವರ ಅನಿಸಿಕೆ.
ಇತ್ತೀಚೆಗೆ ಅಲ್ಲಲ್ಲಿ ಜರಗು ಯಕ್ಷಗಾನ ವಿಚಾರಗೋಷ್ಠಿ -ಕಮ್ಮಟಗಳಿಂದ ಯಾವ ಪ್ರಯೋಜನವೂ ಆಗಿಲ್ಲ. ಯಕ್ಷಗಾನ ಕಲಾವಿದರು, ಭಾಗವತರು, ಮದ್ದಳೆಗಾರರುಗಳ ಸುಮಧುರ ಬಾಂಧವ್ಯದ ಕೊರತೆ ಇದೆ. ಹಿಂದೆ ಹಿರಿಯ ಕಲಾವಿದರುಗಳು ಕಿರಿಯರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು ಎಂಬುದು ಇವರ ಅಭಿಪ್ರಾಯವಾಗಿದೆ.
ಇವರ ವಿಳಾಸ : ಮಂಜುನಾಥ ಎಸ್ ಹೆಗಡೆ
ನೆಟ್ಗಾರ್, ಮಣಿಗಾರ್ ಅಂಚೆ
ಸಿದ್ದಾಪುರ ಉ.ಕ - 581331.

No comments: